19.8.10

illige banni

mounadamatugalu
blog ega
chukkichandira agide

agagi mundina postugalu
e linknalli munduvareyutave

http://chukkichandira.wordpress.com/

7.7.10

ಮರಳಿ ಗೂಡಿಗೆ

ಅವನ ಹೆಸರು ಮೈಕೆ ಕಾರೊಲ್‌. ಬ್ರಿಟನ್‌ನಾತ. 8 ವರ್ಷಗಳ ಹಿಂದೆ ಲಾಟರಿಯಲ್ಲಿ ಆತನಿಗೆ 97 ದಶಲಕ್ಷ ಪೌಂಡ್‌ ಲಾಟರಿ ಹೊಡೆಯಿತು. ಈಗ ಆತ ದೊಡ್ಡ ಉದ್ಯಮಿಯಾಗಿರಬಹುದು ಅಥವಾ ಆರಾಮದಾಯಕ ಜೀವನ ನಡೆಸುತ್ತಿರಬಹುದು ಅಂತ ಯೋಚಿಸುತ್ತಿದ್ದೀರಾ?. ಇಲ್ಲ ಸ್ವಾಮಿ, ಲಾಟರಿ ಹೊಡೆದಾಗ ರಾಜಿನಾಮೆ ನೀಡಿದ್ದ ವಾರಕ್ಕೆ 200 ಪೌಂಡ್‌ ಪಗಾರ ಪಡೆಯುತ್ತಿದ್ದ ಹಳೆಯ ಕೆಲಸಕ್ಕೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾನಂತೆ!
ಅರೇ ಅಷ್ಟು ದುಡ್ಡು ಏನು ಮಾಡಿದ ಅಂತಿರಾ? 26 ವರ್ಷದ ಕಾರೊಲ್‌ ಲಾಟರಿ ದುಡ್ಡನ್ನೇಲ್ಲ ಡ್ರಗ್ಸ್‌, ವ್ಯೆಶೈಯರಿಗೆ, ಪಾರ್ಟಿಗಳಿಗೆ, ಮದ್ಯ, ಜೂಜಾಟ ಮತ್ತು ಐಷಾರಾಮಿ ಕಾರ್‌ಗಳಿಗೆ ವ್ಯಯಿಸಿದ್ದಾನೆ. ಇದರ ನಡುವೆ ಕೊಕೇನ್‌ ಸೇವನೆಗಾಗಿ 5 ತಿಂಗಳು ಜೈಲಿನಲ್ಲಿಯೂ ಇದ್ದು ಬಂದಿದ್ದಾನೆ. ಈಗಲೂ ಈತನ ಮನೆಯಲ್ಲಿರುವ 8 ಬೆಡ್‌ ರೂಂಗಳಲ್ಲಿ ದಿನಕ್ಕೆ ಕನಿಷ್ಠ ಕಡಿಮೆಯೆಂದರೆ ನಾಲ್ಕು ಲೈಂಗಿಕ ಕಾರ್ಯಕರ್ತರೊಂದಿಗೆ ಕಾಲ ಕಳೆಯುತ್ತಾನಂತೆ. ಇಷ್ಟಾದರೂ ಹಳೆಯ ಕೆಲಸಕ್ಕೆ ಅರ್ಜಿ ಸಲ್ಲಿಸಿರುವುದು ನಾಚಿಕೆಗೇಡು ಅಂತ ಆತನಿಗೆ ಇನ್ನೂ ಅನಿಸಿಲ್ಲವಂತೆ. ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನಾಗಬಹುದೋ ಅದೇ ಆಗಿದೆ ಅಂತಿರಾ.
ನಮಗೆ ಅಷ್ಟು ದುಡ್ಡು ಸಿಗುತ್ತಿದ್ದರೆ ನಾವೇನು ಮಾಡುತ್ತಿದ್ದೇವು?JUST THINK

16.6.10

ಸುಮ್ಮನೆ ಸಾಲುಗಳು

*************
ಕಡಲಾಳದಲ್ಲಿ
ಒಡಲಾಳದ
ಭೋರ್ಗರೆತ
ಭೂಕಂಪ
ಭರತ ಇಳಿತ
ಅನವರತ

***********

ಹೆಚ್ಹಿನ ಹೂವುಗಳು ಮುಂಜಾನೆಯೇ ಅರಳುತ್ತವೆ
ಸಂಜೆಯದಾಗ ನರಳುತ್ತವೆ

ಸಂಜೆ ಹೂವು ಮಾತ್ರ ಸಂಜೆ ಅರಳುತ್ತದೆ
ಕತ್ತಲಿನತ್ತ ಹೊರಳುತ್ತದೆ
****************************

13.5.10

naguva huvige

ನಗುವ ಹೂವಿಗೆ....

ದಿನಕ್ಕೊಂದಿಷ್ಟು ಮುಗುಳು ನಗು
ದಿನಕರನ ನೋಡಿ..
ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗು
ಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗು

ಕಪ್ಪು ಸಮಾಜದ ನಡುವೆ
ಕಣ್ಣಾ ಮುಚ್ಚಾಲೆ ಆಟವೇ...
ಯಾರಿಗೂ ಕಾಣದಾಂಗೆ ಸ್ಫುರಿಸುವೆ
ಮುಗುಳ್ನಗೆಯ ಒಲವ ನೋಟ...

ನಿನ್ನೀ ನಗುವಲ್ಲಿ ನೂರು ಮಾತು
ನೂರೊಂದು ಮಧುರ ಕಾವ್ಯ..
ಭಾವ ನವಿರೇಳುತಿದೆ
ನಲಿದಾಡುತಿದೆ ನವಿಲಾಗಿ ಮನಸ್ಸು...

ಒಲವ ರಂಗವಲ್ಲಿ ಚೆಲುವ ರಾಗದಲ್ಲಿ
ಅನುರಾಗದ ಕಂಪು ಕಣಜ
ನಿನ್ನೀ ಮನ ಮೈಮಾಟದಲ್ಲಿ
ಮಳೆ ಬಿಲ್ಲ ಚೆಲುವು...

ನಿತ್ಯ ನಗುವ ಮಲ್ಲಿಗೆಯಾಗು
ಕನಸ ಮುದ್ದು ಬದುಕ ಹಾಳೆಗೆ
ಸಮಾಜದ ಉರಿಯ ನಾಲಗೆಗೆ ಸಿಗದಾಂಗೆ
ಅಕ್ಷಯ ನಗುವಿರಲಿ ನಾಳೆಗೆ...

10.5.10

ಒಂದೇ ವಾಕ್ಯದ ಎರಡು ಕತೆ

೧.
ಅವನು ಅವಳ ತಿರಸ್ಕರಿಸೋ ಹೊತ್ತಿಗೆ ಅವಳಿಗೆ ಹೊಟ್ಟೆನೋವು ಆರಂಭವಾಗಿತ್ತು

೨. ಚೋಮ ಮನೆಯೊಳಗೆ ಯಾಕೆ ಬರೋಲ್ಲ, ಅನ್ನೋ ಮಗನ ಪ್ರಶ್ನೆಗೆ ಅಮ್ಮ "ಮನೆಯೊಳಗೆ ಭೂತವಿದೆ' ಎಂದಳು

3.5.10

ಇಷ್ಟ

ಅವಳಿಗೆ
ಬೆಡ್ ರೂಂ ಇಷ್ಟ
ಆದರೆ,
ಮನೆಯದ್ದಲ್ಲ

27.2.10

ಗೋರಿ ಗೋರಿಗಳ ನಡುವೆ ಲಗೋರಿ

ಊಸರವಲ್ಲಿ ನನ್ನೂರು
ದಿನ ದಿನವೂ ಬಣ್ಣ ಬದಲಾಯಿಸುತ್ತಿದೆ

ಸೂರು ಏರುತ್ತಿದೆ, ನಿಟ್ಟುಸಿರು ಜೊತೆಗೆ
ತೇರು ಎಳೆಯೋರಿಲ್ಲ ಹಳೆ ರಥಗಳು ಜಾತ್ರೆಗೆ..
ಉಕ್ಕುತುಕ್ಕು ಹಿಡಿಯೋ ಮುನ್ನ ಕಾಯಿಸಿ ಬಡಿಯೋರಿಲ್ಲ
ಬೇವು, ಬೆಲ್ಲ, ಎಳ್ಳು ಎಲ್ಲ್ಲಾಅರ್ಥವಾಗೊದಿಲ್ವ

ಎಲೆಗರು ಆಸೆಯಿಂದ ಕೆಚ್ಚಲು ನೋಡುತ್ತಿಲ್ಲ
ಕಟ್ಟಿರುವೆ ಕಚ್ಚುತಿಲ್ಲ, ನೆಲಗಚ್ಚುತ್ತಿರುವ ಅರಿವಿಲ್ಲ
ಹಿಂಗಾರ, ಮುಂಗಾರ, ದಿನಕ್ಕೆ ಎಷ್ಟು ಕಾಲ ಹೇಳು ಕಾಲ
ಹೇಳು ಪ್ರೀತಿಗೂ ಬಂದಾವ ಬರಗಾಲ

ಮೈ ನೆರೆದಿದ್ದ ಹುಡುಗಿ, ಗುಳಿ ಕೆನ್ನೆ ಬೆಡಗಿ
ಬಾಣಂತಿ ಕಳೆದು ಹೋಗಿಹಳು ಸೊರಗಿ
ಚಿಲಿಪಿಳಿ ಹಕ್ಕಿ, ಕುಹೂ ಕುಹೂ ಕೊಳಲು.. ಎಲ್ಲಿ ಅಳಿಲು
ಹೇಳು ಊಸರವಲ್ಲಿ ನಿನಗೆ ಎಷ್ಟು ಬಣ್ಣ

kadu kadade ಇದ್ದರೂ ಬಣ್ಣ ಎಷ್ಟು ಬದಲಾದರೂ
ಬದಲಾಗಿಲ್ಲ ನನ್ನ ಒಲವಿನ ಹುಡುಗಿ
ಅದೇ ಉಬ್ಬು, ತಗ್ಗು ನಯ ನಾಜೂಕು
ಸಾಕೆನಗೆ ಕೊನೆಯವರೆಗೂ

ಗೋರಿ ಗೋರಿಗಳ ನಡುವೆ ಲಗೋರಿ !

2.2.10

ಬರೆದಂತೆ ಸಾಲುಗಳು

ಹುಣ್ಣಿಮೆ ಚಂದಿರ ನನ್ನ ಗೆಳೆಯ
ದೂರದ ಚುಕ್ಕಿ ನನ್ನ ಸಖಿ....

ನಾನು ರೆಕ್ಕೆ ಸೋಲದ
ಎಲ್ಲೇ ಮೀರಿದ ಹಕ್ಕಿ...

ಬೆಳದಿಂಗಳ ಬಯಸಿ ಹಾರುವೆ ಜಗವಿಡಿ
ರೆಕ್ಕೆ ಸೋತರು ನಾನು ಸೋಲಲಾರೆ

ಕೊನೆಯವರೆಗೆ ಹಾರೋದು ಮಾತ್ರ ನನ್ನ ಕೆಲಸ
ಚಂದಿರ ಜೊತೆ ಇರೋ ತನಕ
ಚುಕ್ಕಿ ಸಖಿ ಅಗೋ ತನಕ

3.1.10

ನೆನಪು

ಸಿ ಅಶ್ವಥ್ ಇನ್ನಿಲ್ಲ
ಅಂತ ಯಾರೋ
ಹೇಳಿದರು
ನಾನು mp3 ಆನ್ ಮಾಡಿದೆ
ಅಲ್ಲಿ ಅವರು ಹಾಡುತ್ತಿದ್ದರು

25.12.09

ಚಿಟ್ಟೆಯ ಕವಿತೆ


ಸ್ನೇಹ ಸಾಕೆನಿಸಿದರೆ

ಹೇಳು ಹೂವೆ..


ನಾನು ಹೋಗುವೆ

ಸೂರ್ಯನೆಡೆಗೆ


ರೆಕ್ಕೆ ಸುಟ್ಟು ಹೋದ ಮೇಲೆ

ನಿನ್ನ ಬುಡ ಸೇರುವೆ

6.12.09

ಮೌನದ ಗೆಳತಿಗೆ


ನೀನೇಕೆ ಮೌನಿಯದೆ ಗೆಳತಿ
ಯಾರೊಂದಿಗೂ ಮಾತನಾಡುತ್ತಿಲ್ಲ
ಯಾರೊಂದಿಗೂ ಬೆರೆಯುತ್ತಿಲ್ಲ
ನಿನ್ನಸ್ಟಕ್ಕೆ ನೀನು .....
ನಿನಗೆ ನಿನ್ನದೇ ಪ್ರಪಂಚ ..
ಕಣ್ಣೆತ್ತಿ ಒಮ್ಮೆ ನೋಡು
ಕಾಣುತ್ತಿಲ್ಲವೇ ನಾನು ...
ನನ್ನ ಕಣ್ಣಲ್ಲಿರುವ ಪ್ರೀತಿ
ಕಾಣುತ್ತಿಲ್ಲವೇ ನಿನಗೆ
ಮೌನದಲಿ ಮೌನವಾಗಿ ಅದೇನು ಯೋಚನೆ
ನಿನ್ನ ನೆನೆದು ಪಡುತ್ತಿದ್ದೇನೆ ಯಾತನೆ
ಮೌನದ ಗೆಳತಿಯಲ್ಲಿ
ಮೌನ ಮುರಿ ಎಂದಾಗ
ಮೌನವೇ ಮಾತಿಗೆ ಉತ್ತರವಾದಾಗ
ಮೌನವೇ ಮಾತಿಗೆ ಪ್ರಶ್ನೆ ಯಾದಾಗ
ನಾ ... ಸತ್ಯ ತಿಳಿದುಕೊಂಡೆ
ಗೆಳತಿ ನೀ .. ಮೌನಿ ಎಂದು ತಿಳಿದಾಗ
ನಾನು ... ಮೌನಿಯದೆ

17.11.09

ಕಣ್ ರೆಪ್ಪೆ ಹೇಳಿದ ಹನಿಗಳು

ನನ್ನನ್ನು
ಸದಾ ಹಿಂಬಾಲಿಸುತಿವೆ
ನೆರಳು ...
ಜೊತೆಗೆ ನಿಟ್ಟುಸಿರು..!
*********
ಪ್ರೀತಿ ಹಿಮಾಲಯದ
ತುತ್ತ ತುದಿಗೆ
ತಲುಪಿ
ಹಿಂತುರುಗಿ ನೋಡಿದಾಗ
ಅಲ್ಲಿ ನೀನರಲಿಲ್ಲ
ನಾನು ಕೆಳಕ್ಕೆ ಧುಮುಕಿದೆ

******
ನೀನು
ಕೈ ಕೊಟ್ಟಾಗ
ಕೇಳಿದ
ನಗುವಿನ ಸದ್ದು
ನನ್ನದಲ್ಲ..
ವಿಧಿಯದ್ದು .!

****
ನೀನು
ಚಂದ್ರನ
ತಂದು ಕೊಡೆಂದು
ಕೇಳಿದ ದಿನ
ಅಮಾವಾಸ್ಯೆ

12.7.09

ಕಹಾನಿ

ಪ್ರೇಮ ಕಹಾನಿ
ಬರೆಯಲು ಕುಳಿತಾಗ

ಏಳು ಗುಡ್ದದಾಚೆ
ಮಮತೆಯ ಗೂಡಲ್ಲಿ ಕಾದು ಕುಳಿತಿಹ
ಅಮ್ಮನ ನೆನಪಾಗಿ

ಕಾಗದದ ಕಹಾನಿ
ಮೇಲೆ
ಎರಡು ಕಣ್ ಹನಿ

17.6.09

ಚಂದಿರ

ಬಾನ ಚಂದಿರನ
ತಂದು ಕೊಡೆಂದು
ಕೇಳಿದ ಮಗುವಿಗೆ

ಕಳೆದು ಹೋದ ಇನಿಯನ
ಚಂದಿರನಲ್ಲಿ
ನೋಡುತಿರುವ

ಅಮ್ಮನ ಕಣ್ಣೀರು ಕಾಣಿಸಲಿಲ್ಲ

ಮಳೆ

ಮುಂಗಾರು ಮಳೆಗೆ
ಕಾಯುತಿದ್ದಳು
ಮಳೆಯೊಂದಿಗೆ ಬಂದ
ಗುಡುಗು ಮಿಂಚಿಗೆ
ಬೆದರಿ
ಬೆವರಿದಳು

10.6.09

ಅವಳು ಮತ್ತು ಅವನು

ಅವಳು ಜಿಂಕೆಯದಾಗ
ಅವನು ಚಿರತೆಯಾದ..

ಅವಳು ಹೂವಾದಾಗ
ಅವನು ದುಂಬಿಯಾದ..

ಆದರೆ,
ಅವಳು ತಾಯಿಯಾದಾಗ ಮಾತ್ರ
ಅವನು ಕಾಣೆಯಾದ

19.5.09

ಕೋರಿಕೆ

ಕಸಬ್ ನನ್ನು
ಬೇಗ ಕಳುಹಿಸಿ
ಅಪ್ಸರೆಯರು
ಕಾಯುತ್ತಿರಬಹುದು

1.5.09

ಆಗಮನ

ಕಷ್ಟಗಳು
ಒಮ್ಮೊಮ್ಮೆ
ಸದ್ದಿಲ್ಲದೆ
ಬರುತ್ತವೆ
ಪ್ರೀತಿಯ
ಹಾಗೆ

ಅರ್ಥ

ಅವಳ ಮಾತಿಗೆ
ಹಲವು ಅರ್ಥ ಇದೆ
ಅದೇ
ರೀತಿ
ಮೌನಕ್ಕೂ

ಸೋಲು

ಮಾತಿಗೂ ಮೌನಕ್ಕೂ
ಜಟಾಪಟಿ
ಕೊನೆಗೆ
ಸೋತ ಮಾತು
ಮೌನಕ್ಕೆ
ಶರಣಾಯಿತು

ಪ್ರಶ್ನೆ

ಎಲ್ಲಾ ಬಿಟ್ಟು
ನನ್ನ ಬಳಿ ಬಂದವಳು
ಅಕ್ಷಯ
ಜೇನು ಎಲ್ಲಿಂದ ತಂದಳು

ಕೆಲವು ಸಾಲುಗಳು ನಿನಗಾಗಿ

ನಿನ್ನ ಸೃಷ್ಟಿಸಿದ
ಬ್ರಹ್ಮನ ಮೇಲೆ
ದೇವತೆಗಳು
ಕೋಪಿಸಿಕೊಂಡಿದ್ದಾರೆ


ತೋಟದಲ್ಲಿ
ಹೂವುಗಳು
ಸರತಿ ಸಾಲಿನಲ್ಲಿ
ನಿಂತಿವೆ
ನಿನ್ನ ಮುಡಿಗೆರಳು
ಜೊತೆಗೆ ನಾನು ...


ನಿನ್ನ
ಬೆಳದಿಂಗಳ ನಗುವಿಗೆ
ಚಂದ್ರ ನಾಚಿಕೊಂಡಿದ್ದಾನೆ

ಉತ್ತರ

ನಿನ್ನ ನೂರಾರು
ಪ್ರಶ್ನೆಗಳಿಗೆ
ಉತ್ತರ
ನನ್ನಲ್ಲಿದೆ
ಆದರೆ
ಹೇಳೋಕೆ
ಪದಗಳು ಇಲ್ಲ

21.4.09

ನಿನ್ನ ತಣ್ಣಗಿನ
ಕಣ್ಣಲ್ಲಿ ಹುಡುಕಿದೆ
ಪ್ರೀತಿ
ಆದರೆ
ನನ್ನ ಕೆಂಪಗಿನ
ಕಣ್ಣ ಬಗ್ಗೆ
ನಿನಗ್ಯಾಕೆ ಭೀತಿ